ವಿವಿ ಸಾಗರಕ್ಕೆ ಸದ್ದಿಲ್ಲದೆ ಹರಿದು ಬಂತು ಎತ್ತಿನಹೊಳೆಹೊಸದುರ್ಗ ತಾಲೂಕಿನ ವಿವಿ ಸಾಗರ ಜಲಾಶಯಕ್ಕೆ ಎತ್ತಿನ ಹೊಳೆ ಯೋಜನೆಯ ನೀರನ್ನು ತಾತ್ಕಾಲಿಕವಾಗಿ ಹರಿಸುವ ರಾಜ್ಯ ಸರ್ಕಾರದ ಆಶಯ ಕೊನೆಗೂ ಈಡೇರಿದ್ದು, ಕಳೆದ ಒಂದು ವಾರದಿಂದ ವೇದಾವತಿಗೆ ನದಿಗೆ ಎತ್ತಿನ ಹೊಳೆ ನೀರು ಸೇರ್ಪಡೆಯಾಗಿದೆ. ಪ್ರತಿ ನಿತ್ಯ ಐದಾರು ತಾಸು ಮಾತ್ರ ಪಂಪ್ ರನ್ ಆಗುತ್ತಿದ್ದು, 150 ಕ್ಯೂಸೆಕ್ಸ್‌ನಷ್ಟು ನೀರು ಮಾತ್ರ ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಆಹುತಿ ಹಳ್ಳದಿಂದ ಬರುವ ಎತ್ತಿನಹೊಳೆ ನೀರು ಕಡೂರು ತಾಲೂಕಿನ ಯಗಟಿಪುರ ಸಮೀಪ ವೇದಾವತಿ ಸೇರಿದೆ.