ಪಠ್ಯಪುಸ್ತಕದಲ್ಲಿ ಜನಪದ ಸೇರಿಸಿ ಸಾಹಿತ್ಯಕ್ಕೆ ಬೆಳಕು ತನ್ನಿಪ್ರಾಥಮಿಕ, ಪ್ರೌಢಶಾಲಾ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ನಾಡೋಜೆ ದಿವಂಗತ ಜಾನಪದ ಸಿರಿ ಸಿರಿಯಜ್ಜಿರ ಜನಪದ ಗೀತೆಗಳನ್ನು ಸೇರಿಸಬೇಕು. ಆಧುನಿಕ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಾದ ಲಾವಣಿ, ಸೋಬಾನೆ, ದೇವರ ಪದಗಳು, ಮತ್ತು ಸಾಂಸ್ಕೃತಿಕ ವೀರರ ಕಥನ ಗೀತೆಗಳನ್ನು ಪರಿಚಯಿಸಬೇಕಾಗಿದೆ ಎಂದು ಪರಶುರಾಮಪುರದ ಅಭಿರುಚಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಚಾಲಕ ಓ. ಚಿತ್ತಯ್ಯ ಅಭಿಪ್ರಾಯಪಟ್ಟರು.