ಗೌರಸಮುದ್ರ: ಖಾಸಗಿ ಬಾರ್ ವಿರುದ್ದ ಮುಂದುವರೆದ ಪ್ರತಿಭಟನೆತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಗ್ರಾಮದ ಖಾಸಗಿ ಬಾರ್ ಮುಚ್ಚುವಂತೆ ಗ್ರಾಮಸ್ಥರು, ಮಹಿಳೆಯರು, ಗ್ರಾಮ ಪಂಚಾಯಿತಿ ಸದಸ್ಯರು ಅಹೋರಾತ್ರಿ ಧರಣಿ ನಡೆಸಿ ಬಾರ್‌ಗೆ ಬೀಗಜಡಿದು ಪ್ರತಿಭಟಿಸಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದ ಬಾರ್ ಮುಚ್ಚಬೇಕೆಂದು ಆಗ್ರಹಿಸಿದ್ದರು.