ರಸ್ತೆ ಅಗಲೀಕರಣ ನಿಮಿತ್ತ ಕಟ್ಟಡ ತೆರವು ಕಾರ್ಯ ಚುರುಕುನಗರದ ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿ ನಿಮಿತ್ತ ಕಟ್ಟಡ ತೆರವು ಕಾರ್ಯ ಮಂಗಳವಾರವೂ ಭರದಿಂದ ಸಾಗಿತು. ನಗರದ ಮುಖ್ಯ ರಸ್ತೆಯ ರಾಮಮಂದಿರ, ಮಸೀದಿ, ಕ್ರಿಶ್ಚಿಯನ್ ರುದ್ರಭೂಮಿ ತಡೆಗೋಡೆ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲೂ ಜೆಸಿಬಿ ಯಂತ್ರ ಅಬ್ಬರಿಸಿದೆ. ತಾಲೂಕು ಕಚೇರಿ ಕಾಂಪೌಂಡ್ , ಅನಿಲ್ ಲಾಡ್ಜ್ ಮುಂಭಾಗದ ಕಟ್ಟೆ, ತಾಲೂಕು ಕಚೇರಿ, ಮಾರುತಿ ಡಾಬಾ ಪಕ್ಕ ಮಂಗಳವಾರ ರಸ್ತೆ ವಿಸ್ತರಣೆ ಕಾರ್ಯಕ್ಕೆ ತೆರವು ಕಾರ್ಯ ನಡೆಯಿತು.