ಹೊಸ ಕೆರೆ ಕೋಡಿ: ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಸಿರಿಗೆರೆ: ಪಟ್ಟಣದ ಹೊಸ ಕೆರೆ ಭರ್ತಿಯಾಗಿ ಎರಡು ದಿನಗಳ ಹಿಂದೆಯೇ ಕೋಡಿ ಬಿದ್ದಿತ್ತು. ಈ ದಿನ ಮೆದಿಕೇರಿಪುರ, ದೊಡ್ಡಿಗನಾಳ್ ಹಾಗೂ ಜಮ್ಮೇನಹಳ್ಳಿ ಹಳ್ಳಗಳ ಮೂಲಕ ಬಹಳಷ್ಟು ನೀರು ಹರಿದು ಬಂದಿದ್ದರಿಂದ ಕೆರೆಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರ ಪರಿಣಾಮವಾಗಿ ಅಳಗವಾಡಿ-ಸಿರಿಗೆರೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ನಿರೀಕ್ಷೆ ಮೀರಿ ನೀರು ಹರಿದದ್ದರಿಂದ ಅಳಗವಾಡಿ, ಓಬಳಾಪುರ, ಬಾವಿಹಾಳ್ ಕಡೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೆಲವು ಗ್ರಾಮಗಳಿಗೆ ಹೋಗುವ ಜನರಿಗೆ ತೊಂದರೆ ಉಂಟಾಗಿತ್ತು.