ಮೈನಿಂಗ್ ಯಾರ್ಡ್‌ಗೆ ಅಧಿಕಾರಿಗಳ ಭೇಟಿನಗರದ ರೈಲ್ವೆ ಗೇಟ್ ಬಳಿ ಇರುವ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಾಸ್ತಾಂಶವನ್ನು ಅರಿಯಲು ಮತ್ತು ವರದಿ ಸಿದ್ಧಪಡಿಸಲು ಉಪವಿಭಾಗಾಧಿಕಾರಿ ಮೊಹಬೂಬ್ ಜಿಲಾನಿ ವಾಯುಮಾಲಿನ್ಯ ಪರಿಸರ ಅಧಿಕಾರಿ, ಜಿಲ್ಲಾ ಯೋಜನಾಧಿಕಾರಿ, ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.