ಬೆಳ್ತಂಗಡಿ ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆಮಾರಿಗುಡಿ ಮೈದಾನದಿಂದ ತಾಲೂಕು ಮಟ್ಟದ ಅಧಿಕಾರಿಗಳು ಸಹಿತ ಆರಕ್ಷಕ ಸಿಬ್ಬದಿ, ಶಾಲಾ ಮಕ್ಕಳ ಜತೆಗೂಡಿ ಮೆರವಣಿಗೆ ನಡೆಯಿತು. ಎಸ್.ಡಿ.ಎಂ. ಕಾಲೇಜು ರಾಷ್ಟ್ರಗೀತೆ, ವಾಣಿ ಆ.ಮಾ.ಶಾಲೆ ಧ್ವಜಗೀತೆ ಮತ್ತು ರೈತಗೀತೆ, ಬೆಳ್ತಂಗಡಿ ಸ.ಪ್ರೌ.ಶಾಲೆ ನಾಡಗೀತೆಯನ್ನು, ಹೋಲಿ ರೆಡೀಮರ್ ಆ.ಮಾ.ಶಾಲೆ, ಸಂತ ತೆರೆಸ ಪ್ರೌಢಶಾಲೆ ಮಕ್ಕಳು ವಂದೇ ಮಾತರಂ ಗೀತೆ ಹಾಡಿದರು.