ಮತಗಳ್ಳತನ ವಿರುದ್ಧ ದ.ಕ. ಜಿಲ್ಲಾದ್ಯಂತ ಸಹಿ ಸಂಗ್ರಹ: ಐವನ್ ಡಿಸೋಜಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅ.13 ಮತ್ತು 14ರಂದು ಈ ಅಭಿಯಾನ ನಡೆಯಲಿದೆ. ಅ.13ರಂದು ಸಂಜೆ 4 ಗಂಟೆಗೆ ಉರ್ವ ಜಂಕ್ಷನ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಿ ಸಹಿ ಸಂಗ್ರಹ, ಸಂಜೆ 5.30ಕ್ಕೆ ಉರ್ವ ಸ್ಟೋರ್, 6.30ಕ್ಕೆ ಕುದ್ರೋಳಿ, ಅ.14ರಂದು ಸಂಜೆ 3 ಗಂಟೆಗೆ ಶಕ್ತಿನಗರ, 4.30ಕ್ಕೆ ಬಿಕರ್ನಕಟ್ಟೆ, 6 ಗಂಟೆಗೆ ಕದ್ರಿ ಮಾರುಕಟ್ಟೆ ಬಳಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಐವನ್ ಡಿಸೋಜ ಹೇಳಿದರು.