ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಸಂಚಾರ3 ಆನೆಗಳ ಹಿಂಡೊಂದು ನೆರಿಯ, ಚಿಬಿದ್ರೆ, ತೋಟತ್ತಾಡಿ, ಚಾರ್ಮಾಡಿ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಳಿಕ ಸಂಚರಿಸಿದೆ. ನೆರಿಯದ ಪರ್ಪಳ ಪ್ರದೇಶದಿಂದ ಬಂದಿದ್ದ ಕಾಡಾನೆ ಹಿಂಡು ಅಣಿಯೂರು ಶಾಲೆ, ಬಯಲು,ಬಸ್ತಿ ಇತರ ಕಡೆ ಸಂಚರಿಸಿದೆ. ಈ ವೇಳೆ ಸ್ಥಳೀಯರು ಆನೆಗಳನ್ನು ಓಡಿಸಿದ್ದು ಇದರಿಂದ ಆನೆಗಳ ಹಿಂಡು ಚದುರಿದ್ದು ಇದರಲ್ಲಿ ಒಂದು ಆನೆ ತೋಟತ್ತಾಡಿ, ಬೆಂದ್ರಾಳ ಕಡೆ ಸಂಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.