ಇರುವೈಲಿನ ನಗರ ಸಂಕೀರ್ತನೆಯ ವಿಶೇಷ ಪರಂಪರೆಗೆ ಅಮೃತ ಸಂಭ್ರಮಮೂಡುಬಿದಿರೆ ತಾಲೂಕಿನ ಇರುವೈಲು ಫಲ್ಗುಣಿ ನದಿ ಪರಿಸರದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಐತಿಹಾಸಿಕ ಕಾರಣಗಳಿಗಾಗಿಯೂ ಪ್ರಸಿದ್ಧ . ಇಲ್ಲಿನ ದೇವಿ ಯಕ್ಷಗಾನ, ಸಂಕೀರ್ತನೆ, ರಂಗಪೂಜಾ ಪ್ರಿಯೆ. ವರ್ಷದಲ್ಲಿ ಧನು ಸಂಕ್ರಮಣದಿಂದ ಮಕರ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ದೇವಿ ಮಾಗಣೆಯ 12 ಗ್ರಾಮಗಳ ಸುಮಾರು 1300 ಮನೆಗಳಿಗೂ ಭೇಟಿ ನೀಡಿ ಸೇವೆ ಸ್ವೀಕರಿಸುವುದು ವಾಡಿಕೆ.