‘ಬಿಯಾಂಡ್ ದಿ ಸ್ಕೋರ್’ ರಂಗ ಕಾರ್ಯಾಗಾರಕ್ಕೆ ಚಾಲನೆಡೋಲು ಬಾರಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಪ್ರಕಾಶ್ ರಾಜ್, ಕಲೆಗಳ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಕಾಲೇಜುಗಳಲ್ಲಿ ನಡೆಸುವಂತಹ ಕಾರ್ಯಾಗಾರಗಳು ಪೂರಕವಾಗಿರುತ್ತವೆ. ನನ್ನ ಕಾಲೇಜು ಅವಧಿಯಲ್ಲಿ ಕನ್ನಡ ಅಧ್ಯಾಪಕರು ಪಾಠದ ಜತೆ ಪದ್ಯವನ್ನು ನೋಡುವ, ವಿಮರ್ಶೆ ಮಾಡುವ ಬಗೆಯನ್ನು ತಿಳಿಸಿಕೊಟ್ಟ ಕಾರಣ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಲು ಕಾರಣವಾಯಿತು ಎಂದು ಸ್ಮರಿಸಿದರು.