ಧರ್ಮಸ್ಥಳದಲ್ಲಿ ಭಕ್ತರಿಂದ ವಿಶೇಷ ಅಲಂಕಾರ ಸೇವೆ, ಅಧಿಕ ಭಕ್ತರ ಭೇಟಿನಾಡಿನೆಲ್ಲೆಡೆಯಿಂದ ಅಧಿಕಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಎಲ್ಲೆಲ್ಲೂ ಸಂಭ್ರಮ-ಸಡಗರ, ಹಬ್ಬದ ವಾತಾವರಣ. ಪರಿಚಿತರೂ, ಅಪರಿಚಿತರೂ ನಗುಮೊಗದಿಂದ ಪರಸ್ಪರ ಹೊಸವರ್ಷದ ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು.