ಕೆವಿಕೆಯಲ್ಲಿ ಸಿದ್ಧವಾಗುತ್ತಿದೆ ‘ಬೆಳೇರಿ’ ಸಂರಕ್ಷಿತ ಸಾಂಪ್ರದಾಯಿಕ ಭತ್ತದ ತಳಿಗಳು!ಸತ್ಯನಾರಾಯಣ ಬೆಳೇರಿ ಅವರು ಸುಮಾರು 650ಕ್ಕೂ ಅಧಿಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇದರಿಂದ ಪ್ರೇರಣೆಗೊಂಡ ಕೆವಿಕೆ ವಿಜ್ಞಾನಿಗಳು, ಅವರದೇ ತಳಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ರೈತರಿಗೆ ಪೂರೈಸಲು ನಿರ್ಧರಿಸಿದೆ.