ಮೆಸ್ಕಾಂ ಪುತ್ತೂರು, ಬಂಟ್ವಾಳ ವಿಭಾಗ: ಮಳೆಗಾಲ ಮುನ್ನೆಚ್ಚರಿಕೆ ಸೂಚನೆಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದಾಗಲೀ, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮೆಸ್ಕಾಂ ಮನವಿ ಮಾಡಿದೆ.