ಕೆರೆಕಾಡು ಗ್ರಾಮೋತ್ಸವ ಗೂಡು ದೀಪ ಸ್ಪರ್ಧೆ 2024ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಗ್ರಾಮೋತ್ಸವ ಗೂಡು ದೀಪ ಸ್ಪರ್ಧೆ ಕಾರ್ಯಕ್ರಮ ನಡೆಯಿತು.ಉದ್ಯಮಿ ಸುರೇಶ್ ರಾವ್, ಶ್ರೀನಿಧಿ ಪುನರೂರು ದೀಪ ಹಚ್ಚಿ, ಭಾರತ ಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೂಡು ದೀಪ ಏರಿಸುವ ಮೂಲಕ ಉದ್ಘಾಟಿಸಿದರು.