ಮಳೆ ಬಂದಾಗ ಕೆಸರು ಗದ್ದೆಯಂತಾಗುವ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73 ಇದರ ಕಾಮಗಾರಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಪುಂಜಾಲಕಟ್ಟೆಯಿಂದ ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಕಾಶಿಬೆಟ್ಟು, ಉಜಿರೆ, ಮುಂಡಾಜೆ, ಚಿಬಿದ್ರೆ ಚಾರ್ಮಾಡಿ ತನಕ ಮೊದಲಿನ ಹೆದ್ದಾರಿಯನ್ನುಅಳಿಸಿ ಹೊಸತಾಗಿ ದ್ವಿಪಥವಾಗಿ ರಚನೆಯಾಗುತ್ತಿದೆ. ಮಳೆ ಬಂದರೆ ಈ ಭಾಗ ಕೆಸರು ಗದ್ದೆಯಂತಾಗುತ್ತದೆ.