ಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾರೆ ಸುಕ್ರಿ, ತುಳಸಿ ಅಜ್ಜಿಯರು!ಶಿಕ್ಷಣ, ಹಣ ಬಲವಿಲ್ಲದೆಯೂ ಪ್ರಕೃತಿ ಸೇವೆ, ಸಮಾಜ ಸೇವೆ, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಾದ್ಯಂತ ಗುರುತಿಸಲ್ಪಟ್ಟ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ಸ್ಮರಣಾರ್ಥ ಅವರ ಕಾಯಕ ಮುಂದುವರಿಸುವತ್ತ ಸರ್ಕಾರ ಈವರೆಗೆ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ಮಂಗಳೂರಿನ ಪರಿಸರಾಸಕ್ತರ ಸಂಘಟನೆ ‘ಸಹ್ಯಾದ್ರಿ ಸಂಚಯ’ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.