ಡೇರೆಯಲ್ಲಿ ‘ವೆರೈಟಿ ಸಾರಿ ಸದನ್’ ಬಟ್ಟೆ ಮಳಿಗೆಯ ಮಾಲಕ!ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಾಳು ಡೇರೆಯೊಳಗೆ ಗಣೇಶ ಪ್ರಭು ವಾಸಿಸುತ್ತಿದ್ದಾರೆ. ಟಾರ್ಪಲ್ಗಳನ್ನು ಬಳಸಿ ಮಾಡಿರುವ ಡೇರೆ ಬೀಳುವ ಸ್ಥಿತಿಯಲ್ಲಿದೆ, ಮೇಲ್ಭಾಗದ ಸಿಮೆಂಟ್ ಶೀಟ್ ಆಕಾಶ ತೋರಿಸುತ್ತಿದೆ, ಒಳಭಾಗದಲ್ಲಿ ರಾಶಿ ಹಾಕಲಾದ ಬಟ್ಟೆಗಳ ನಡುವೆ ಗಣೇಶ ಪ್ರಭು ಬದುಕು ದೂಡುತ್ತಿದ್ದಾರೆ.