ತುಳುವಿಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ: ಇಂದು ಮಂಗಳೂರಲ್ಲಿ ನಿಯೋಗ ಸಿಎಂಗೆ ಮನವಿಈಗಾಗಲೇ ಡಾ. ವೀರೇಂದ್ರ ಹೆಗ್ಗಡೆ, ಡಾ. ಮೋಹನ ಆಳ್ವ ಅವರ ಜತೆ ಮಾತುಕತೆ ನಡೆಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ತುಳು ಹೋರಾಟಗಾರರು, ಸಾಹಿತಿಗಳು, ತುಳು ಚಿತ್ರರಂಗದವರು, ಎಲ್ಲ ಕ್ಷೇತ್ರಗಳ ಪ್ರಮುಖರು ಹಾಜರಿರಬೇಕು ಎಂದು ಅವರು ಮನವಿ ಮಾಡಿದರು.