ಹಲಾಲ್ ಬಜೆಟ್ ಅನ್ನೋರಿಗೆ ‘ಸಬ್ಕಾ ವಿಕಾಸ್’ ಬೇಡವೇ?: ಹರೀಶ್ ಕುಮಾರ್ರಾಜ್ಯ ಬಜೆಟ್ನ ಒಟ್ಟು 4 ಲಕ್ಷ ರು.ಗಳಲ್ಲಿ ಶೇ.1ರಷ್ಟನ್ನು ಮಾತ್ರ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಲಾಗಿದೆ. ಮುಸ್ಲಿಮರೂ ಸೇರಿದಂತೆ ಅನೇಕ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತರು ದೇಶದ ಒಟ್ಟು ಜನಸಂಖ್ಯೆಯ ಶೇ.15ರಿಂದ 20ರಷ್ಟಿದ್ದು, ದೇಶದ ಆರ್ಥಿಕ ಶಕ್ತಿ ಹೆಚ್ಚಿಸಲು ಅವರೂ ಕಾರಣಕರ್ತರಾಗಿದ್ದಾರೆ. ಹೀಗಿರುವಾಗ ಶೇ.1ರಷ್ಟು ಅನುದಾನವನ್ನು ಅವರಿಗೆ ನೀಡಬಾರದಾ ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.