ದ.ಕ. ಜಿಲ್ಲೆಯ ಜನತೆಗೆ ತುರ್ತು ಪರಿಸ್ಥಿತಿಯಿಂದ ತೊಂದರೆ ಆಗಿಲ್ಲ: ಮಾಜಿ ಸಚಿವ ರಮಾನಾಥ ರೈಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದ್ದು ಜಿಲ್ಲೆಯ ಜನರಿಗೆ. 20 ಅಂಶಗಳ ಕಾರ್ಯಕ್ರಮಗಳು, ನಿವೇಶನ, ದಖಾಸ್ತು ಭೂಮಿ ಹೀಗೆ ಬಡವರ ಸಬಲೀಕರಣದ ಕಾರ್ಯಕ್ರಮ ಇಂದಿರಾಗಾಂಧಿ ಕಾಲದಲ್ಲಿ ಆಗಿದೆ ಎಂಬುದನ್ನು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವವರಿಗೆ ನೆನಪಿಸಬೇಕಾಗಿದೆ ಎಂದು ರಮನಾಥ ರೈ ತಿಳಿಸಿದರು.