ಪಿಲಿಕುಳ ಜೈವಿಕ ಉದ್ಯಾನವನ ‘ಏಕಸ್ವಾಮ್ಯ’ಕ್ಕೆ ಕೊನೆಗೂ ಬ್ರೇಕ್!ಕರಾವಳಿ ಸೇರಿದಂತೆ ದೇಶ- ವಿದೇಶಗಳ ಅಪರೂಪದ ಜೀವ ಸಂಕುಲದ ತಾಣವಾಗಿರುವ ಪಿಲಿಕುಳ ಜೈವಿಕ ಉದ್ಯಾನವನ (ಪ್ರಾಣಿ ಸಂಗ್ರಹಾಲಯ) ನಿರ್ವಹಣೆಯ ದಶಕಗಳ ಏಕಸ್ವಾಮ್ಯಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಹಲವು ವರ್ಷಗಳ ಬಳಿಕ ಕೊನೆಗೂ ಜೈವಿಕ ಉದ್ಯಾನವನ ನಿರ್ದೇಶಕರ ಹುದ್ದೆಗೆ ಸರ್ಕಾರಿ ಅಧಿಕಾರಿಯ ನೇಮಕವಾಗಿದೆ. ಪ್ರಾಣಿ ಸಂಗ್ರಹಾಲಯದ ಆಶೋತ್ತರಗಳಿಗೆ ಪೂರಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನೇ ಈ ಹುದ್ದೆಗೆ ನೇಮಿಸಿರುವುದು ಮೂಕ ಪ್ರಾಣಿಗಳ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ.