ಸಂಗೀತ ವಿವಿ ಬಗ್ಗೆ ಮಿಥ್ಯಾರೋಪ: ಕ್ರಿಮಿನಲ್ ಕೇಸ್ ಎಚ್ಚರಿಕೆವಿಶೇಷ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳು 2024 ರ ಅಕ್ಟೋಬರ್ನಲ್ಲಿ ಮುಗಿದಿದ್ದು ಡಿಸೆಂಬರ್ 4 ರಿಂದ ಎಲ್ಲ ಪರೀಕ್ಷೆಗಳ ಫಲಿತಾಂಶವನ್ನು ಹಂತ ಹಂತವಾಗಿ ಪ್ರಕಟಿಸಲಾಗಿದೆ. 2025ರ ಜನವರಿ 4 ರಂದು ಪತ್ರಿಕಾಗೋಷ್ಠಿಯನ್ನು ಕರೆಯುವ ಮೂಲಕ ಎಲ್ಲ ವಿಭಾಗಗಳ ರ್ಯಾಂಕ್ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ. ಪರೀಕ್ಷಕರಿಗೆ ಗೌರವಧನ, ಪ್ರಯಾಣ ಭತ್ಯೆ, ಪರೀಕ್ಷಾ ಕೇಂದ್ರಗಳ ನಿರ್ವಹಣಾ ವಚ್ಚವನ್ನು ಪಾವತಿಸಿಲ್ಲ ಎಂಬುದಾಗಿ ಮಾಡಿರುವ ಆಪಾದನೆಯೂ ಸಂಪೂರ್ಣ ಸುಳ್ಳು.