ಕಿಲ್ಲೆ ಮೈದಾನ ಗಣೇಶನಿಗೆ ಸ್ವರ್ಣದ ಸೊಂಡಿಲು, ಕರ್ಣದ್ವಯ ಸಮರ್ಪಣೆಪುತ್ತೂರು ಆಸುಪಾಸಿನ ಸಾರ್ವಜನಿಕ ಶ್ರೀ ಗಣೇಶೋತ್ಸವಗಳಲ್ಲಿ ಕಿಲ್ಲೆ ಮೈದಾನದ ಚೌತಿಗೆ ವಿಶೇಷ ಮಹತ್ವವಿದೆ. ೭ ದಿನ ನಿರಂತರ ಅನ್ನಸಂತರ್ಪಣೆ ನಡೆಯುವ ಗಣೇಶೋತ್ಸವ ಇದಾಗಿದ್ದು, ಇಲ್ಲಿನ ಚೌತಿಯಲ್ಲಿ ದೇವರಿಗೆ ದರ್ಶನ ಬಲಿ, ಮಹಾಗಣಪತಿ ಹೋಮ, ತುಲಾಭಾರ ಸೇವೆ ನಡೆಯುತ್ತದೆ. ಶೋಭಾಯಾತ್ರೆ ಹೊರಡುವ ಮೊದಲು ದೈವಗಳ ನೇಮೋತ್ಸವವೂ ನಡೆಯುವ ಅಪೂರ್ವ ಗಣೇಶೋತ್ಸವ ಇದಾಗಿದೆ.