ವೇಣೂರು ಬಾಹುಬಲಿ ಮಹಾಮಜ್ಜನಕ್ಕೆ ವಿದ್ಯುಕ್ತ ಚಾಲನೆಶುದ್ಧ ನಾರೀಕೇಳದ ನೀರಿನ ಅಭಿಷೇಕವಾದಾಗ ಕಲ್ಪವೃಕ್ಷದ ಸುವಾಸನೆ ಪರಿಸರದಲ್ಲಿ ಹರಡಿತು., ಕಬ್ಬಿನ ರಸದ ಧಾರೆ, ಹಾಲಿನ ನೊರೆ ಭುಜಬಲಿಯ ಅಂಗಾಂಗಳನ್ನು ಮೀಯಿಸಿದಾಗ ಶ್ರಾವಕರು ಪುಳಕಿತರಾದರು. ಬಳಿಕ ಕಲ್ಕ ಚೂರ್ಣ, ಅರಸಿನ ಪುಡಿ, ಕೇಸರಿ ಮಿಶ್ರಿತ ಜಲ, ಚಂದನ ಪುಡಿ, ಶ್ರೀಗಂಧ, ಅಷ್ಟ ಗಂಧದ ಅಭಿಷೇಕ ಮಾಡಲಾಯಿತು. ಭಕ್ತ ಜನರು ಆನಂದೋತ್ಸಾಹದಿಂದ ಜಯಘೋಷ ಮಾಡಿದರು.