ವೇಣೂರು ಮಹಾ ಮಸ್ತಕಾಭಿಷೇಕ: ಆಕರ್ಷಕ ವಸ್ತುಪ್ರದರ್ಶನಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಸುಂದರವಾದ ಅರಣ್ಯ ಮತ್ತು ಪ್ರಾಣಿ ಪಕ್ಷಿಗಳ ಮನೋಹರ ವೈವಿಧ್ಯಮಯ ಸುಂದರ ದೃಶ್ಯಗಳನ್ನು ಹಾಗೂ ಕೃತಕಗುಹೆಯೊಂದನ್ನು ಅರಣ್ಯ ಇಲಾಖೆಯವರು ರಚಿಸಿದ್ದಾರೆ. ಪರಿಸರದಲ್ಲಿ ಶಾಲೆ, ಆಸ್ಪತ್ರೆ ಇತ್ಯಾದಿಗಳೊಂದಿಗೆ ಕೃಷಿ ಚಟುವಟಿಕೆಗಳ ಪ್ರತಿಕೃತಿಗಳನ್ನು, ಕೃತಕ ಜಲಪಾತವೊಂದನ್ನು ನಿರ್ಮಿಸಿ ಆಕರ್ಷಣೀಯವಾಗಿಸಿದ್ದಾರೆ. ವಿವಿಧ ಗಿಡಗಳ ಪ್ರದರ್ಶನವನ್ನೂ ಮಾಡಿದ್ದಾರೆ.