ವಿದ್ಯುತ್ ಪ್ರಸರಣ ಕಂಪನಿಯಿಂದ ಮರಗಳ ಮಾರಣಹೋಮ ಆರೋಪ: ರೈತ ಸಂಘ ಪ್ರತಿಭಟನೆವೀರಕಂಭ ಗ್ರಾಮದ ಕೆಲಿಂಜದ ಬಲ್ಲಮಲೆ ಅರಣ್ಯ ಇಲಾಖೆಗೆ ಸೇರಿದ ಸಿರಿ ಚಂದನ ವನದಲ್ಲಿರುವ ಚಂದನ ಮರಗಳ ಸಹಿತ ಲಕ್ಷಾಂತರ ರು. ಬೆಲೆಬಾಳುವ ಗುಣಮಟ್ಟದ ಮರಗಳನ್ನು ವಿದ್ಯುತ್ ಪ್ರಸರಣದ ಖಾಸಗಿ ಕಂಪನಿಯೊಂದು ಮರಗಳ ಕಡಿದು ಮಾರಣಹೋಮ ಮಾಡಿದೆ ಎಂಬ ಆರೋಪ ಮಾಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕೆಲಿಂಜದಲ್ಲಿ ಕಂಪನಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.