ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪಲ್ಲಕಿ ಉತ್ಸವ, ಮಹಾರಥೋತ್ಸವಪ್ರಸಿದ್ಧ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಕವಾಟೋದ್ಘಾಟನೆ, ತುಲಾಭಾರ ಸೇವೆ ಮಧ್ಯಾಹ್ನ ಮಹಾಸಂಪರ್ಪಣೆ, ರಾತ್ರಿ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಕಟ್ಟೆ ಪೂಜೆ, ಮಹಾ ರಥೋತ್ಸವ, ಅವಭೃತ, ಧ್ವಜಾವರೋಹಣ ನಡೆಯಿತು.