18ರಂದು ಮಾತಾ ಅಮೃತಾನಂದಮಯಿ ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟ, ಒಂದೇ ಶಿಲೆಯಲ್ಲಿ ರೂವುಗೊಂಡ, ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ನಾಲ್ಕು ದ್ವಾರಗಳ ಮೂಲಕ ದರ್ಶನ ಮಾಡಬಹುದಾದ ಶಿವ, ಪಾರ್ವತಿ ದೇವಿ, ಗಣಪತಿ ಮತ್ತು ಸುಬ್ರಹ್ಮಣ್ಯ ವಿಗ್ರಹವುಳ್ಳ ವಿಶಿಷ್ಟ ಕ್ಷೇತ್ರ ಇದಾಗಿದ್ದು, ದೋಷ ನಿವಾರಣಾ ಕ್ಷೇತ್ರವಾಗಿ ಜನಜನಿತವಾಗಿದೆ. ಕಾರ್ಯಕ್ರಮವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಲಲಿತಾ ಅಷ್ಟೋತ್ತರ ಪಠಣದೊಂದಿಗೆ ಆರಂಭಿಸಲಿದ್ದಾರೆ