ಅಂಬ್ಲಮೊಗರು ಗ್ರಾಮದಲ್ಲಿ ಕೃಷಿ ಭೂಮಿ ಕಬಳಿಕೆ ವಿರೋಧಿಸಿ ಪ್ರತಿಭಟನೆಖಾಸಗಿ ಭೂ ಕಬಳಿಕೆದಾರರು ಕೃಷಿ ಭೂಮಿಯನ್ನು ಎಗ್ಗಿಲ್ಲದೆ ಕಬಳಿಸುತ್ತಿದ್ದು, ರೈತರ ಬದುಕನ್ನು ಅಸಹನೀಯಗೊಳಿಸುತ್ತಿದ್ದಾರೆ. ರೈತರ ಭೂಮಿ, ಬದುಕನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಅಂಬ್ಲಮೊಗರು ಗ್ರಾಮಸ್ಥರು, ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿ ವಿಧಾನಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಿದರು.