ಜನಸಾಮಾನ್ಯರ ಮನೆ- ಮನ ತಲುಪಿದ ಅಂಚೆ: ರಾಜೇಂದ್ರ ಕುಮಾರ್ವೃದ್ಧರು, ಅಶಕ್ತರು, ಮಕ್ಕಳು, ಮಹಿಳೆಯರಿಗೆ ಹಳ್ಳಿಯಿಂದ ದೆಹಲಿಯವರೆಗೆ ಇಲಾಖೆಯ ಎಲ್ಲ ಸವಲತ್ತುಗಳ ಬಗ್ಗೆ ಮಾರ್ಗದರ್ಶನದೊಂದಿಗೆ ಸೇವೆ ನೀಡುತ್ತಿರುವ ಅಂಚೆ ಇಲಾಖೆಯು ಜನರ ಮನೆ- ಮನಗಳನ್ನು ತಲುಪಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಪ್ಪೆಪದವಿನಲ್ಲಿ ನೂತನ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.