ಪುತ್ತೂರು ನಗರಸಭೆಯಿಂದ 3.5 ಕೋಟಿ ಮಿಗತೆ ಬಜೆಟ್ ಮಂಡನೆಪುತ್ತೂರು ನಗರಸಭೆಯ ೨೦೦೨೫-೨೬ನೇ ಸಾಲಿನ ವಾರ್ಷಿಕ ಬಜೆಟನ್ನು ಶುಕ್ರವಾರ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಂಡಿಸಿದ್ದು, ೭೬.೩೪ ಕೋಟಿ ರು. ಆಯ ಹಾಗೂ ೭೨.೭೯ ಕೋಟಿ ರು. ವ್ಯಯನ್ನು ಒಳಗೊಂಡಂತೆ ೩.೫೫ ಕೋಟಿ ರು. ಮಿಗತೆ ಬಜೆಟ್ ಮಂಡಿಸಿದ್ದಾರೆ. ೨೦೨೫-೨೬ ನೇ ಸಾಲಿನಲ್ಲಿ ನಗರಸಭೆಯ ಒಟ್ಟು ಜಮೆ ೭೬,೩೪,೪೮,೨೭೮.೦೦ ರು. ಹಾಗೂ ಖರ್ಚು ೭೨,೭೯,೨೭,೯೬೪.೦೦ ರು. ಆಗಿದ್ದು ೩,೫೫,೨೦,೩೧೪.೦೦ ಉಳಿಕೆಯ ಬಜೆಟ್ ಮಂಡಿಸಲಾಯಿತು.