ಸೇವೆ, ತ್ಯಾಗದ ಮೂಲಕ ಸಮಾಜಕ್ಕಾಗಿ ಬದುಕಬೇಕು : ಡಾ.ಪ್ರಭಾಕರ ಭಟ್ ಕಲ್ಲಡ್ಕಉಳ್ಳಾಲ ತಾಲೂಕಿನ ಪಜೀರು ಗ್ರಾಮದ ತದ್ಮ ಎಂಬಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ನಿಕಟಪೂರ್ವ ಅಧ್ಯಕ್ಷ, ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಬಡ ಮಹಿಳೆ ದೇವಕಿ ಮುಗೇರ ಅವರಿಗೆ ಗ್ರಾಮವಿಕಾಸ ಸಮಿತಿ ಪಜೀರು, ಸಂಘ ಶತಾಬ್ದಿ ನಿಮಿತ್ತ ಸೇವಾ ಬಸ್ತಿಯಲ್ಲಿ ನಿರ್ಮಾಣಗೊಂಡ ‘ನಮೋ ಕುಟೀರ’ ಎಂಬ ಸುಸಜ್ಜಿತ ನೂತನ ಮನೆಯ ಕೀಲಿ ಕೈಯನ್ನು ಸೋಮವಾರ ಹಸ್ತಾಂತರ ಮಾಡಲಾಯಿತು.