ಕೋಮು ಗಲಭೆ ನಡೆದರೆ ಬದುಕು ಕಷ್ಟ, ಯುವಜನರ ಭವಿಷ್ಯಕ್ಕೆ ಮಾರಕ: ನವೀನ್ ಪಡೀಲ್ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರನಟ ನವೀನ್ ಡಿ. ಪಡೀಲ್, ಮಂಗಳೂರಿನ ಸೌಹಾರ್ದತೆ ಉಳಿಯಬೇಕು. ಕೋಮು ದ್ವೇಷ ಅಳಿಯಬೇಕು ಎಂಬ ಹಿನ್ನೆಲೆಯಲ್ಲಿ ಸೌಹಾರ್ದತೆಗೆ ಸಂಬಂಧಿಸಿದ ‘ನೆರೆ ಕರೆ’ ಚಿತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.