ರವಿಯ ಪ್ರಭೆ ಎಲ್ಲರ ಅಂತರಂಗ, ಬಹಿರಂಗ ಬೆಳಗಲಿ: ಓಂಕಾರ ಶ್ರೀಇಂದಿನಿಂದ ಒಳ್ಳೆಯ ತೇಜಸ್ಸನ್ನು ಇಟ್ಟುಕೊಂಡು ಸೂರ್ಯ ಉತ್ತರಾಯಣ ಪೂರ್ವ ಕಾಲಕ್ಕೆ ಪ್ರವೇಶ ಮಾಡುತ್ತಾನೆ. ಅಂತಹ ತೇಜಸ್ಸನ್ನು ಹೆಚ್ಚಿಸಿಕೊಂಡಿರುವಂತಹ ರವಿಯ ಪ್ರಭೆ ನಮ್ಮೆಲ್ಲರ ಅಂತರಂಗ, ಬಹಿರಂಗದ ಮೇಲೆ ಬೀಳಲಿ. ಎಲ್ಲರಿಗೂ ಶ್ರದ್ಧೆ, ಭಕ್ತಿ, ನಂಬಿಕೆ, ನಿಷ್ಠೆ, ಸದಾಕಾಲ ಸನ್ಮಾರ್ಗ, ಸುದ್ಬುದ್ಧಿ, ಸುಜ್ಞಾನವನ್ನು ಕರುಣಿಸಲಿ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.