ಆಧುನಿಕ ಯುವಜನತೆಗೆ ಜನಪದರ ಜೀವನಶೈಲಿ ಮಾದರಿಜನಪದ ಸಾಹಿತ್ಯವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ರಚನೆಯಾಗಿರುವ ಸಾಹಿತ್ಯ. ಜನಪದರು ಮೂಡಣ ಕೆಂಪೇರಿದಾಗ ಮುಂಗೋಳಿ ಕೂಗಿದಾಗ ಎದ್ದು ಎಳ್ಳುಜೀರಿಗೆ ಬೆಳೆಯುವ ಭೂಮಿಯೇ ತಾಯಿ ಎಂದು ಶ್ರದ್ಧಾ-ಭಕ್ತಿಯಿಂದ ಕೆಲಸ ಆರಂಭಿಸುತ್ತಿದ್ದರು. ಮಂದಿ ಮಂದಿ ಎಂದು ನಂಬಲು ಹೋದರೆ ನಡುನೀರಿನಲ್ಲಿಯೇ ನಮ್ಮನ್ನ ಕೈ ಬಿಡುತ್ತಾರೆ. ಆದರೆ ಭಗವಂತ ನಮ್ಮನ್ನ ಕಡೆತನಕ ಕಾಯುತ್ತಾನೆ ಎಂದು ಹಾಡಿನ ಮೂಲಕ ಬೇಡಿಕೊಳ್ಳುತ್ತಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಪ್ರಭಾಕರ್ ಹೇಳಿದ್ದಾರೆ.