ಹೊನ್ನಾಳಿ ಸರ್ಕಾರಿ ಕಾಲೇಜು ಸುಧಾರಣೆ ಶ್ಲಾಘನೀಯರಾಜ್ಯದಲ್ಲೇ ಹೊನ್ನಾಳಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಮಧ್ಯ ಕರ್ನಾಟಕದ ಕೇಂದ್ರ ಬಿಂದು ಎಂದೂ ಹೇಳುತ್ತಾರೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಹಾಗೂ 100 ವರ್ಷ ತುಂಬಿರುವ ತುಂಗಭದ್ರಾ ಹಳೆಯ ಸೇತುವೆ ಸಹ ಇಲ್ಲಿದೆ. ಈ ಸೇತುವೆಯ ನಿರ್ಮಾಣ ಪರಿಯನ್ನು ನೋಡಿಕೊಂಡು ಹೋಗಲು ಬ್ರಿಟಿಷರು ಹೊನ್ನಾಳಿಗೆ ಆಗಮಿಸಿದ ಬಗ್ಗೆಯೂ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.