ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ವಿರುದ್ಧ ಎಫ್ಐಆರ್‌ಗೆ ಆದೇಶನಗರದಲ್ಲಿ ಪಾಲಿಕೆ, ದೂಡಾ ಗಮನಕ್ಕೆ ತಾರದೇ, ಅನುಮತಿ ಪಡೆಯದೇ, ಸುರಕ್ಷತಾ ಕ್ರಮ ಕೈಗೊಳ್ಳದೇ, ಹೋರ್ಡಿಂಗ್ಸ್ ಮತ್ತು ಫ್ಲೆಕ್ಸ್ ಅಳವಡಿಸುವುದು, ಅದರಲ್ಲೂ ಪಾದಚಾರಿ ಮಾರ್ಗ ಮತ್ತು ಪಾರ್ಕ್‌ಗಳ ಸೌಂದರ್ಯಕ್ಕೆ ಧಕ್ಕೆ ತಂದ ಕಡೆ ಅವುಗಳನ್ನು ತೆರವುಗೊಳಿಸಿ ಎಫ್‌ಐಆರ್ ದಾಖಲಿಸಲು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.