ದಾ-ಹ ಅಭಿವೃದ್ಧಿಗೆ ₹1226 ಕೋಟಿಗಾಗಿ ಸಿಎಂಗೆ ಮನವಿದಾವಣಗೆರೆ-ಹರಿಹರ ಅವಳಿ ನಗರಗಳನ್ನು ಸುಂದರ, ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ₹1226.00 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ದೂಡಾ ಅಧ್ಯಕ್ಷರು, ಸದಸ್ಯರು, ಪಾಲಿಕೆ ಮೇಯರ್, ಉಪ ಮೇಯರ್, ಸದಸ್ಯರ ನಿಯೋಗ ಮಂಗಳವಾರ ಸಂಜೆ ಮನವಿ ಅರ್ಪಿಸಿದೆ.