ಯುಬಿಡಿಟಿಗಾಗಿ ದಾವಣಗೆರೆ ಬಂದ್: 17 ಬಂಧನ, ಬಿಡುಗಡೆರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೆಗ್ಗಳಿಕೆಯ, ಬಡ, ಮಧ್ಯಮ ವರ್ಗದ ಮನೆ ಮಕ್ಕಳು ಎಂಜಿನಿಯರ್ ಆಗಲು ಆಸರೆಯಾಗಿದ್ದ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಶೇ.50 ಪೇಮೆಂಟ್ ಕೋಟಾ ನೀತಿ ಜಾರಿಗೊಳಿಸಿದ್ದನ್ನು ರದ್ದುಪಡಿಸುವಂತೆ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡರೂ, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.