ಪೌರಕಾರ್ಮಿಕರ ಶ್ರಮ, ಸೇವೆ ಅನನ್ಯ: ಮಂಜುನಾಥ್ಪ್ರತಿನಿತ್ಯ ನಗರ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರ ಸೇವೆ ಅನನ್ಯ, ಬಣ್ಣಿಸಲು ಆಗದು. ಇದು ಎಂದಿಗೂ ಮರೆಯಲಾಗದಂಥ ಸೇವೆ. ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ, ಕೈಯಲ್ಲಾದಷ್ಟು ಸಹಾಯ ಮಾಡುವುದು ಪುಣ್ಯದ ಕೆಲಸ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ದಾವಣಗೆರೆಯಲ್ಲಿ ಹೇಳಿದ್ದಾರೆ.