ಇವತ್ತೇ ರವಿಯಣ್ಣ ಮನೆಗೆ ಸಿದ್ದಣ್ಣನ ಕರೆ ತರೋಕೆ ಸಿದ್ಧ!ದಾವಣಗೆರೆ ಜಿಲ್ಲಾ ಬಿಜೆಪಿಗೆ ಎಸ್.ಎ. ರವೀಂದ್ರನಾಥ, ಡಾ.ಜಿ.ಎಂ. ಸಿದ್ದೇಶ್ವರ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ನಾಯಕರು ಒಂದಾಗಲೆಂಬ ಆಸೆ ಎಲ್ಲರಿಗೂ ಇದ್ದು, ಇದಕ್ಕಾಗಿ ರವೀಂದ್ರನಾಥರ ನಿವಾಸಕ್ಕೆ ಸಿದ್ದೇಶ್ವರರನ್ನು ನಾವು ಕರೆ ತರಲು ಸಿದ್ಧ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ. ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಹೇಳಿದ್ದಾರೆ.