ರೈತರ ಮರೆತು ಅಧಿಕಾರ ಮಜಾದಲ್ಲಿ ಶಾಮನೂರು ಕುಟುಂಬಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಆದರೆ, ಶಾಮನೂರು ಅವರ ಕುಟುಂಬದಲ್ಲಿ ಮೂವರಿಗೂ ಅಧಿಕಾರವಿದ್ದರೂ, ಬೆಳೆ ಹಾನಿ ಸಮೀಕ್ಷೆಗೆ ಸೂಚಿಸಿಲ್ಲ, ರೈತರ ಬೆನ್ನಿಗೆ ನಿಂತಿಲ್ಲ. ಅಧಿಕಾರವನ್ನು ಕೇವಲ ಮಜಾ ಮಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.