ಹೊನ್ನಾಳಿಯ ಲಿಂಗಾಪುರದಲ್ಲಿ ಕುಡಿವ ನೀರಿಗೂ ತೊಂದರೆಭದ್ರಾ ನಾಲೆಯಲ್ಲಿ ಕಳೆದ ತಿಂಗಳಿಂದ ನೀರು ಬಾರದ್ದರಿಂದ ಜನರು, ಜಾನುವಾರುಗಳಿಗೂ ನೀರಿನ ಸಮಸ್ಯೆಯಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಮೂರು ಕಿಲೋಮೀಟರ್ ದೂರದ ತುಂಗಭದ್ರ ನದಿಗೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನಿರ್ಲಕ್ಷತನದಿಂದ ಉಂಟಾಗಿರುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದಿದ್ದರೆ ಗ್ರಾಪಂ ಮುಂದೆ ಧರಣಿ ಕೂರಲಾಗುವುದು.