ಯುವಪೀಳಿಗೆಯಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯಲಿ: ಪ್ರೊ.ಬಿ.ಡಿ.ಕುಂಬಾರಎಲ್ಲಿಯವರೆಗೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲ್ಲವೋ, ನಿಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ನಿಮಗೆ ಯಶಸ್ಸು ಸಿಗುವುದಿಲ್ಲ. ಸ್ವಾಮಿ ವಿವೇಕಾನಂದರ ಸಂದೇಶದಂತೆ ನೀವು ನಡೆದರೆ ಯಶಸ್ಸು ಪಡೆಯಲು ಸಾಧ್ಯ ಈ ನಿಟ್ಟಿನಲ್ಲಿ ನೀವು ಅಂದುಕೊಂಡ ಗುರಿಯತ್ತ ಹಗಲಿರುಳು ಪರಿಶ್ರಮ ಪಡಿ, ನೀವು ನೀವಾಗಿಯೆ ಮುನ್ನಡೆದರೆ ವೀರ ಸನ್ಯಾಸಿಯ ಮಾರ್ಗ ಕಂಡುಕೊಳ್ಳಲು ಸಾಧ್ಯ.