ಈ ಬಾರಿಯ ಬಜೆಟ್‌ನಲ್ಲಿ ಟೈಲರ್ಸ್ ಕಲ್ಯಾಣ ಮಂಡಳಿ ಘೋಷಿಸಿ; ಮುಖ್ಯಮಂತ್ರಿಗೆ ಆಗ್ರಹಟೈಲರ್ ವೃತ್ತಿ ಮಾಡುವವರಲ್ಲಿ ಹೈಸ್ಕೂಲ್, ಪದವಿ ಶಿಕ್ಷಣ ಪಡೆದವರೂ ಇದ್ದು, ಸರ್ಕಾರಿ ಕೆಲಸಕ್ಕೆ ನೆಚ್ಚಿ ಕೂಡದೇ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾೆ. ಕೆಲವರು ಸಣ್ಣಪುಟ್ಟ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅಲ್ಲಿನ ಕೆಲಸಗಾರರು 20 ಸಂಖ್ಯೆ ಒಳಗಿರುವುದರಿಂದ ಅಲ್ಲಿ ಅಂತಹವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸುತ್ತಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯ ವಂಚಿತರಾಗಿದ್ದಾರೆ.