ಹೊನ್ನಾಳಿ ಅರ್ಬನ್ ಸೊಸೈಟಿ ಚುನಾವಣೆ; 15 ಸದಸ್ಯರು ಮರು ಆಯ್ಕೆ15 ಮಂದಿ ಸದಸ್ಯರ ಪೈಕಿ ಇಬ್ಬರು ಮಹಿಳೆಯರು, ಎಸ್ಸಿ, ಎಸ್ಟಿ ತಲಾ ಒಬ್ಬರು ಅಭ್ಯರ್ಥಿ ಸೇರಿ ಒಟ್ಟು 4 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ 17 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎಸ್ಸಿ ವಿಭಾಗದಲ್ಲಿ ಡಾ.ರಾಜಾನಾಯ್ಕ, ಎಸ್ಟಿ ವಿಭಾಗದಲ್ಲಿ ಪ್ರಸಾದ್, ಮಹಿಳೆಯರ ಪೈಕಿ ನಾಗರತ್ನಾ ಮತ್ತು ರೂಪಾ ಈ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರೆ ಇನ್ನುಳಿದ 11 ಜನ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ