ಉಗ್ರರ ವಿಚಾರದಲ್ಲಿ ಕಠಿಣ ಹೃದಯಿಗಳಾಗಬೇಕು: ತರಳಬಾಳು ಶ್ರೀಕಾಶ್ಮೀರದ ಪೆಹಲ್ಗಾಂ ನರಮೇಧ ಹಿನ್ನೆಲೆ ಪಾಕಿಸ್ತಾನದ ಮೇಲಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಭಾರತ ಕೈಗೊಂಡಿರುವ ಯುದ್ಧ ಇದಾಗಿದೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರು, ಪಾಕಿಸ್ತಾನದ ಜನರ ಬಗ್ಗೆ ಕರುಣೆ ತೋರುವುದು ಮಾನವೀಯತೆ. ಆದರೆ, ಉಗ್ರರ ಬಗ್ಗೆ ಅಷ್ಟೇ ಕಠಿಣ ಹೃದಯಿಗಳಾಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.