ಶಿವಮೊಗ್ಗ ಬಿಷಪ್ಗೆ ಘೇರಾವ್ ವೇಳೆ ತಳ್ಳಾಟ: ನಾಲ್ವರಿಗೆ ಗಾಯಸ್ಥಳೀಯ ಬಸಲಿಕಾ ಚರ್ಚ್ ದೇಣಿಗೆ, ಮರಿಯಾ ಸದನ ಹಾಲ್ ಬಾಡಿಗೆ, ಮರಿಯಾ ನಿವಾಸ ಶಾಲೆ ಮುಂತಾದ ಹಣದ ದುರುಪಯೋಗ ನಡೆಯುತ್ತಿದೆ, ಚರ್ಚ್ಗೆ ಸೇರಿದ ಭೂಮಿ ಪರಭಾರೆಯಾಗಿದೆ ಎಂದು ಆರೋಪಿಸಿ, ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರಿಗೆ ಸ್ಥಳಿಯ ಚರ್ಚ್ ಭಕ್ತರು ಘೇರಾವು ಹಾಕಲು ಪ್ರಯತ್ನಿಸಿದ್ದು, ಈ ವೇಳೆ ನೂಕಾಟ, ತಳ್ಳಾಟದಿಂದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.