ಇನ್ಸ್ಟಾಗ್ರಾಮಲ್ಲಿ ಅಂಬೇಡ್ಕರ್, ಮೀಸಲಾತಿ ಬಗ್ಗೆ ಕೆಟ್ಟ ವೀಡಿಯೋ: ದೂರುಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನ ** thekingofkarnataka ** ಹಾಗೂ **dj_troll ** ಹೆಸರಿನ ಖಾತೆಗಳಲ್ಲಿ ಯಾರೋ ಸದರಿ ಐಡಿ ಬಳಕೆದಾರರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ಗೆ ಸಂಬಂಧಿಸಿದಂತೆ ಅಂಬೇಡ್ಕರ್ ಜೀವನಶೈಲಿ, ಉನ್ನತ ದರ್ಜೆ ಡಿಗ್ರಿಗಳು, ಮೀಸಲಾತಿ ಬಗ್ಗೆ ಮತ್ತು ಜೈಭೀಮ್ ಪದದ ಬಗ್ಗೆ ಅತಿ ಕೆಟ್ಟದಾಗಿ ವೀಡಿಯೋ ಮಾಡಿ, ಹರಿಬಿಟ್ಟಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.